ಶ್ರೀ ಮಹಾವಿಷ್ಣು ದೇವಸ್ಥಾನ

Temple Hero Image

ಪರಿಚಯ

ಭಕ್ತ ಮಹಾಶಯರೇ, ಕರ್ನಾಟಕದ ಪಶ್ಚಿಮಕ್ಕೆ ಕರಾವಳಿ ಭೋರ್ಗರೆಯುವ ಅರಬ್ಬಿ ಸಮುದ್ರ ಅದಕ್ಕೆ ಹೊಂದಿಕೊಂಡಿರುವ ಪರಶುರಾಮ ಸೃಷ್ಟಿಯ ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಿಂದ 14 ಕಿಲೋಮೀಟರ್ ಸಾಗಿದರೆ ಪಶ್ಚಿಮ ಘಟ್ಟದ ತಪ್ಪಲಿನಲ್ಲಿ 200 ಮನೆಗಳಿರುವ ಗ್ರಾಮೀಣ ಸೊಗಡಿನ ನಿತ್ಯಹರಿದ್ವರ್ಣದ ಪುಟ್ಟ ಊರು ಕುಂಟವಾಣಿ.

I

ಸಾವಿರಾರು ವರ್ಷಗಳ ಇತಿಹಾಸ

ಇಲ್ಲಿ ಸಾವಿರಾರು ವರ್ಷಗಳ ಇತಿಹಾಸವಿರುವ ಪುರಾಣಪ್ರಸಿದ್ಧ ಮಹಾವಿಷ್ಣು ದೇವಸ್ಥಾನವಿದೆ. ದೇವರ ಪ್ರತಿಮೆ ಕಪ್ಪುಶಿಲೆಯದಾಗಿದ್ದು ಪೂರ್ವಾಭಿಮುಖವಾಗಿದೆ. ಗರ್ಭಗುಡಿಯ ಸುತ್ತಲೂ ಕೆಂಪು ಕಲ್ಲಿನ ಪೌಳಿಯ ಕುರುಹುಗಳಿದ್ದು, ಉತ್ತರ ಭಾಗದಲ್ಲಿ ಶ್ರೀನಾಗ ಸಾನಿಧ್ಯ, ದೇವಸ್ಥಾನದ ಬಲಭಾಗದಲ್ಲಿ ತೀರ್ಥಬಾವಿ, ದೇವಸ್ಥಾನದ ಮುಂಭಾಗದಲ್ಲಿ ತೀರ್ಥಮಂಟಪದ ಕುರುಹು ಇದ್ದು ಅದರಲ್ಲಿ ಶಿಥಿಲಗೊಂಡ ಗರುಡನ ಅರ್ಧ ಭಾಗ ಕಾಣಸಿಗುತ್ತದೆ. ಪೂರ್ವದಲ್ಲಿ ಶ್ರೀಯಕ್ಷಿ ಸಾನಿಧ್ಯವಿದ್ದು, ಅದರ ಪಕ್ಕದಲ್ಲಿ ಬೃಹದಾಕಾರದ ಅರಳಿಮರವಿದೆ. ದಕ್ಷಿಣ ಭಾಗದಲ್ಲಿ ಬಲಿಕಲ್ಲು ಸಹ ಕಾಣಸಿಗುತ್ತದೆ. ಗತವೈಭವದ ಕಾಲದಲ್ಲಿ ಶ್ರೀ ಮಹಾವಿಷ್ಣು ದೇವರನ್ನು ಪಲ್ಲಕ್ಕಿಯಲ್ಲಿ ಮೆರವಣಿಗೆ ಮಾಡಿ ಅನುಷ್ಠಾನದಿಂದ ಪೂಜೆ ಪುರಸ್ಕಾರಗಳನ್ನು ಮಾಡಿಕೊಂಡು ಬಂದಿರುವ ಬಗ್ಗೆ ಪುರಾವೆಗಳು ಸಿಕ್ಕಿವೆ.

II

ಋಷಿಮುನಿಗಳ ತಪೋಭೂಮಿ

ಈ ಪುಣ್ಯ ಭೂಮಿ ಋಷಿಮುನಿಗಳ ತಪೋಭೂಮಿಯಾಗಿದ್ದು, ವರದಹಳ್ಳಿಯ ಶ್ರೀ ಶ್ರೀ ಶ್ರೀಧರ ಸ್ವಾಮಿಜಿಯವರು ದೇವಸ್ಥಾನಕ್ಕೆ ಭೇಟಿ ನೀಡಿ ಪಾವನಗೊಂಡ ಕ್ಷೇತ್ರವಿದು.ಈ ಪ್ರದೇಶ ಹಿಂದೆ ಜೈನರ ಆಳ್ವಿಕೆಗೆ ಒಳಪಟ್ಟಿದ ಭೂಮಿಯಾಗಿದ್ದು, ಕಳೆದ ಒಂದು ಶತಮಾನದಿಂದ ಆದಾಯವಿಲ್ಲದ ಈ ದೇವಸ್ಥಾನವನ್ನು ಬ್ರಾಹ್ಮಣ ಕುಟುಂಬದವರು ಕಷ್ಟದ ದಿನಗಳಲ್ಲೂ ಗ್ರಾಮಸ್ಥರ ಸಹಕಾರದೊಂದಿಗೆ ಆಡಂಬರಕ್ಕಿಂತ ಭಕ್ತಿ ಪೂರ್ವಕವಾಗಿ ಮುನ್ನಡೆಸಿಕೊಂಡು ಬರುತ್ತಿದ್ದಾರೆ.ಅವರಲ್ಲಿ ಶ್ರೀಯುತ ಶಂಕರ ವೆಂಕಟರಮಣ ಭಟ್ 83ರ ಇಳಿ ವಯಸ್ಸಿನಲ್ಲೂ ನಾನು ಪೂಜೆ ಮಾಡಿದ ಶ್ರೀ ಮಹಾವಿಷ್ಣುವಿನ ಸನ್ನಿಧಿ ಪುನರ್ ನಿರ್ಮಾಣ ಆಗಬೇಕು ಎಂದು ಹಗಲಿರುಳು ಕನಸು ಕಂಡವರು ಆದರೆ ಈಗ ಅವರ ಕನಸು ನನಸಾಗುವ ಎಲ್ಲಾ ಲಕ್ಷಣಗಳು ನಮ್ಮ ಮುಂದಿದೆ.

III

ಜೀರ್ಣೋದ್ಧಾರ ಸಮಿತಿ

ಸಂಪೂರ್ಣ ಶಿಥಿಲಾವಸ್ಥೆಯಲ್ಲಿರುವ ಈ ದೇವಸ್ಥಾನ ಜೀರ್ಣೋದ್ಧಾರ ಮಾಡಿದ್ದಲ್ಲಿ ಮುಂದಿನ ಯುವ ಪೀಳಿಗೆಗೆ ಹಾಗೂ ಗ್ರಾಮಕ್ಕೆ ಸಮೃದ್ಧಿಯಾಗುತ್ತದೆ ಅನ್ನೋದು ಆರೂಢ ಪ್ರಶ್ನೆಯಲ್ಲಿ ಬಂದ ವಿಚಾರ, ಈ ಕಾರ್ಣಿಕ ದೇವಸ್ಥಾನವನ್ನು ಪುನರ್ ನಿರ್ಮಾಣಗೊಳಿಸಲು, ಸಂಪೂರ್ಣ ಶಿಲಾಮಯ ಅಂದಾಜು ವೆಚ್ಚ 1.5 ಕೋಟಿ (ಒಂದು ಕೋಟಿ ಐವತ್ತು ಲಕ್ಷ) ಯ ಅವಶ್ಯಕತೆ ಇದ್ದು, ನಂಬಿದ ಕುಟುಂಬದವರ, ಗ್ರಾಮಸ್ಥರ, ಊರ, ಪರ ಊರ ಮಹಾದಾನಿಗಳ ಸಹಕಾರದೊಂದಿಗೆ, ನೂತನ ಜೀರ್ಣೋದ್ಧಾರ ಸಮಿತಿಯನ್ನು ರಚಿಸಿ, ಬ್ಯಾಂಕ್ ಖಾತೆಯನ್ನು ತೆರೆದಿದ್ದು, ನೂತನ ದೇಗುಲವನ್ನು ಮುಂದಿನ ಆರು ತಿಂಗಳಲ್ಲಿ ನಿರ್ಮಾಣ ಮಾಡುವ ಗುರಿಯನ್ನು ಹೊಂದಲಾಗಿದೆ. ದಯವಿಟ್ಟು ಭಕ್ತ ಮಹಾಶಯರಾದ ತಾವೆಲ್ಲರೂ ಈ ಪುಣ್ಯ ಕಾರ್ಯದಲ್ಲಿ ಕೈಜೋಡಿಸಿ, ಶ್ರೀ ಮಹಾವಿಷ್ಣುವಿನ ಕೃಪೆಗೆ ಪಾತ್ರರಾಗಬೇಕಾಗಿ ಈ ಮೂಲಕ ವಿನಮ್ರಪೂರಕವಾಗಿ ಬೇಡಿಕೊಳ್ಳುತ್ತಿದ್ದೇವೆ.

ನೀಲನಕ್ಷೆ

ಹೊಸ ದೇವಸ್ಥಾನದ ಪ್ರಸ್ತಾವಿತ ವಿನ್ಯಾಸ

Temple Blueprint

ವಿಶೇಷ ಸೂಚನೆ

  • ₹5,000 ಅಥವಾ ಅದಕ್ಕಿಂತ ಹೆಚ್ಚಿನ ದೇಣಿಗೆ ನೀಡುವ ಭಕ್ತಾದಿಗಳ ಹೆಸರನ್ನು 'ಅಮೃತ ಶಿಲೆ'ಯಲ್ಲಿ ಶಾಶ್ವತವಾಗಿ ಕೆತ್ತಲಾಗುವುದು.
  • ₹25,000 ಅಥವಾ ಅದಕ್ಕಿಂತ ಹೆಚ್ಚಿನ ದೇಣಿಗೆ ನೀಡುವ ಭಕ್ತಾದಿಗಳ ಹೆಸರನ್ನು 'ಅಮೃತ ಶಿಲೆ'ಯಲ್ಲಿ ಶಾಶ್ವತವಾಗಿ ಕೆತ್ತಲಾಗುವುದು. ಅಲ್ಲದೆ, ದೇವಸ್ಥಾನದ 'ಲೋಕಾರ್ಪಣಾ' ಸಮಾರಂಭದ ಸಂದರ್ಭದಲ್ಲಿ ಅವರಿಗೆ ಸ್ಮರಣಿಕೆ ನೀಡಿ ಗೌರವಿಸಲಾಗುವುದು.

ಧನಸಹಾಯ

Bank Name

K.D.C.C Bank

Account Number

122008764669

IFSC Code

KSCB0016001

Our Generous Donors

ಸಂಪರ್ಕ ಮಾಹಿತಿ

ಹೆಸರು

ವೆಂಕಟರಮಣ ಭಟ್ಟ

ಹುದ್ದೆ

ಅರ್ಚಕರು

ದೂರವಾಣಿ

+91 08385-295370

ದೇವಾಲಯದ ಸ್ಥಳ

ಕುಂಟವಾಣಿ, ಅಂಚೆ : ಹಾಡವಳ್ಳಿ, ಭಟ್ಕಳ ತಾಲೂಕು, ಉತ್ತರ ಕನ್ನಡ ಜಿಲ್ಲೆ - 581320